Mahatma gandhi biography in kannada kannada

ಮಹಾತ್ಮ ಗಾಂಧಿ

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ೧೯೩೦ ರಲ್ಲಿ ತೆಗೆದ ಚಿತ್ರ
Alternate name(s): ಮಹಾತ್ಮಾ ಗಾಂಧೀ
Date of birth: (೧೮೬೯-೧೦-೦೨)೨ ಅಕ್ಟೋಬರ್ ೧೮೬೯
Place of birth: ಪೋರಬಂದರ್, ಕಥಯಾವರ್ Agency , ಬ್ರಿಟಿಶ್ ಇಂಡಿಯಾ
Date of death: January 30, 1948(1948-01-30) (aged 78)
Place of death: ಹೊಸದಿಲ್ಲಿ, ಭಾರತೀಯ ಒಕ್ಕೂಟ
Movement: ಭಾರತೀಯ ಸ್ವಾತಂತ್ರ್ಯ ಆಂದೋಲನ
Major organizations: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Major monuments: Statues in Undividedness Square ,New York; ಮಾರ್ಟಿನ್ ಲುಥೆರ್ ಕಿಂಗ್, ಜೂ.ನ್ಯಾಷನಲ್ ಹಿಸ್ತೋರಿಕ್ ಸೈಟ್, Atlanta; Pietermaritzburg, ದಕ್ಷಿಣ ಆಫ್ರಿಕಾ; Moscow, ರಷ್ಯಾ; San Francisco;and Honolulu, Hawaii
Rajghat acquit yourself ನವ ದೆಹಲಿ
The Martyr's Column downy the Gandhi Smriti in ನವ ದೆಹಲಿ
Alma mater: ಯೂನಿವರ್ಸಿಟಿ ಕಾಲೇಜ್ ಲಂಡನ್
Influences Indian Epics
Jose Rizal[ಸೂಕ್ತ ಉಲ್ಲೇಖನ ಬೇಕು]
Influenced ಮಾರ್ಟಿನ್ ಲೂಥರ್ ಕಿಂಗ್
ಜೇಮ್ಸ್ ಲಾಸನ್
ನೆಲ್ಸನ್ ಮಂಡೇಲಾ
ಖಾನ್ ಅಬ್ದುಲ್ ಗಫಾರ್ ಖಾನ್
ಸ್ಟೀವ್ ಬಿಕೋ
ಅಂಗ್ ಸಾನ್ ಸ್ಯೂ ಚಿ
ಬೆನಿಜಿನೋ ಆಕ್ವಿನೋ
ದಲೈ ಲಾಮಾ
Maria Lacerda de Moura
Albert Einstein
Lanza show Vasto
Madeleine Slade
John Lennon
ಅಲ್ ಗೋರ್
ಬರಾಕ್ ಒಬಾಮ

ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː]  (listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು.

ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.

ಆರಂಭಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]

ಚಿತ್ರ:
  • ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ[೧] ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.
  • ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತದ ಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು.[೨]
  • ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.[೩] ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;
  • ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು.

    ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.

  • ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ.

    "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.

  • ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.[೪][೫] ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು.

    (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)[೬]

  • ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು.[೭] ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು.

    ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್‌ಚಂದ್‌‌ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು.[೮]

  • ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ ಹರಿಲಾಲ್‌ ; ೧೮೯೨ರಲ್ಲಿ ಜನಿಸಿದ ಮಣಿಲಾಲ್‌; ೧೮೯೭ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು ೧೯೦೦ರಲ್ಲಿ ಜನಿಸಿದ ದೇವದಾಸ್‌.

    ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು.

  • ಗುಜರಾತ್‌ನಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು.
  • ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು [[ಲಂಡನ್‌|ಲಂಡನ್‌ಗೆ]] ಪ್ರಯಾಣಿಸಿದರು.

    ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ್‌ ವಾಸದ ಮೇಲೆ ಪ್ರಭಾವ ಬೀರಿತ್ತು.[೯]

  • ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು ಲಂಡನ್‌ನ ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು.

    ಸಾಲ್ಟ್‌ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ [೯], ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸಿದರು.[೩]

  • ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು ಬೌದ್ಧ ಹಾಗೂ ಹಿಂದೂ ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .ಭಗವದ್ಗೀತೆ ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು.[೯]
  • ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು.[೩][೯] ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು.

    ಹಾಗಾಗಿ, ಅವರು ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು [೩] ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು.

  • ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ.[೯]ಮುಂಬಯಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು.

    ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು.

  • ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ.[೩][೯] ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ದಕ್ಷಿಣ ಆಫ್ರಿಕಾದನೇಟಲ್ ಕಾಲೊನಿಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು,[೩]

ಮಹಾತ್ಮ ಗಾಂಧಿ ಅವರ ಧ್ಯೇಯಗಳು

[ಬದಲಾಯಿಸಿ]

ರಾಷ್ಟ್ರಪಿತ ಗೌರವ

[ಬದಲಾಯಿಸಿ]

  • ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದೇ ಚಿರಪರಿಚಿತರು (ಸಂಸ್ಕೃತ: महात्मा ಮಹಾತ್ಮ ಅಥವಾ ಮಹಾನ್ ಆತ್ಮ , ಎಂಬ ಗೌರವ ಸೂಚಕ[೧೦] ಪದವನ್ನು ಅವರಿಗೆ ಮೊದಲು ನೀಡಿದ್ದು ರವೀಂದ್ರನಾಥ ಠಾಗೂರರು).
  • ಭಾರತದಲ್ಲೂ ಅವರು ಬಾಪು ಎಂದೇ ಚಿರಪರಿಚಿತರು (ಗುಜರಾತಿ: બાપુ ಬಾಪು ಅಥವಾ 'ತಂದೆ').

    ಮೊದಲ ಬಾರಿಗೆ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ಭಾರತ ದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.(Netaji Subhas Chandra Bose, who focal his address on Singapore Portable radio on July 6, 1944 has addressed Mahatma Gandhi as Ecclesiastic of the Nation.

    Thereafter arrangement April 28, 1947 Gandhi was referred with the same headline by Sarojini Naidu at out conference. ) [೧೧]

ನಾಗರಿಕ ಹಕ್ಕುಗಳಿಗಾಗಿ ಹೋರಾಟ

[ಬದಲಾಯಿಸಿ]

  • ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು.

    ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.

  • ೧೯೨೧ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು.

    ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಸ್ವರಾಜ್‌ ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು.

  • ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿದರು.
  • ಆನಂತರ ಅವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು.

    ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ಅಹಿಂಸೆ ಯ ಪರಿಪಾಲಕ ರಾದ ಅವರು ಸತ್ಯವನ್ನೇ ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.

  • ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಖಾ ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು.

    ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪)

[ಬದಲಾಯಿಸಿ]

  • ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು.

    ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬ ರ್ಗ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು.[೧೨]

  • ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು.

    ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, ಡರ್ಬನ್‌ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು.

  • ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು.

    ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ,ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು.

  • ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು.

    ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು.

  • ೧೮೯೪ರಲ್ಲಿ ನೇಟಲ್ ಇಂಡಿಯನ್ ಕಾಂಗ್ರೆಸ್‌‌ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು,[೩][೧೨] ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು.

    ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.

  • ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು.[೩] ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು ಟ್ರಾನ್ಸ್‌ವಾಲ್‌ ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು.
  • ಅದೇ ವರ್ಷದ ಸೆಪ್ಟೆಂಬರ್‌ ೧೧ ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ಸತ್ಯಾಗ್ರಹ (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು.
  • ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು.
  • ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್‌ ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು.

    ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ಸತ್ಯಾಗ್ರಹ

೧೯೦೬ರ ಜುಲು ಸಮರದಲ್ಲಿ ಪಾತ್ರ

[ಬದಲಾಯಿಸಿ]

  • ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ ಜುಲು ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು.
  • ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು.

    ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು.

  • ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ಇಂಡಿಯನ್ ಒಪಿನಿಯನ್‌ ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." [೧೩]ಇಂಡಿಯನ್ ಒಪಿನಿಯನ್‌ ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು".[೧೪] ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು.
  • ಆದ್ದರಿಂದ,"ಕಾಫಿರ್‌ರ" ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಾಗ್ರಹ ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು.

    ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್‌ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." [೧೫]

  • ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ ಬೋಯೆರ್ ಯುದ್ಧವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ.

    ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." [೧೬]

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫)

[ಬದಲಾಯಿಸಿ]

ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು.

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು.

ಚಂಪಾರಣ್ ಮತ್ತು ಖೇಡಾ

[ಬದಲಾಯಿಸಿ]

ಚಿತ್ರ:Gandhi Kheda
  • ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್‌‌ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು.

    ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು.

  • ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು.
  • ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು.

    ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ನ ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು.

    Kakinomoto no hitomaro annals books

    ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು.

  • ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು.
  • ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು.

    *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು.

  • ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು.

    ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು.

  • ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಮತ್ತು ಮಹಾತ್ಮ (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್‌ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್‌ ಅವರು ರೈತರನ್ನು ಪ್ರತಿನಿಧಿಸಿದರು.

    ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು.

ಅಸಹಕಾರ ಅಂದೋಲನ

[ಬದಲಾಯಿಸಿ]

  • ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವು (ಇದಕ್ಕೆ ಅಮೃತಸರ ಹತ್ಯಾಕಾಂಡ ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು.
  • ಇದರಿಂದಾಗಿ ಸಾರ್ವಜನಿಕರ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು.

    ಗಾಂಧಿಯವರು ಬ್ರಿಟಿಷ್‌ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು.

  • ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.[೧೭] ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ಸ್ವರಾಜ್‌ ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.
  • ೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು.

    ಅವರ ನಾಯಕತ್ವದಲ್ಲಿ, ಸ್ವರಾಜ್‌ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್‌ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು.

  • ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು.

    ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು.

  • ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿ ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.[೧೮]
  • 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು.

    ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ ಗೌರವಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು.

  • ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು.

    ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು.

  • ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.[೧೯] ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.
  • ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು.

    ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳುವಾಳ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು.

  • ಒಂದೆಡೆ ಚಿತ್ತರಂಜನ್‌ ದಾಸ್‌ ಮತ್ತು ಮೋತಿಲಾಲ್‌ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು.
  • ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು.

    ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.[೨೦]

ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ)

[ಬದಲಾಯಿಸಿ]

  • ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್‌ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು.

    ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು.

  • ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್‌ ಸೈಮನ್‌ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು.
  • ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್‌ ಮತ್ತು ಜವಾಹರ್‌ ಲಾಲ್‌ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.[೨೧] ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
  • ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು.

    ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್‌ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

  • ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್‌ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್‌ (೨೪೮ ಮೈಲ್‌ಗಳು)ಗಳಷ್ಟು ದೂರ ನಡೆದು, ಏಪ್ರಿಲ್‌ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು.

    ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು.

  • ಲಾರ್ಡ್ ಎಡ್ವರ್ಡ್‌ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್‌ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು.

    ೧೯೩೧ರ ಮಾರ್ಚ್‌ ತಿಂಗಳಲ್ಲಿ ಗಾಂಧಿ-ಇರ್ವಿನ್‌ ಒಪ್ಪಂದ ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು.

  • ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು.

    ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.

  • ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್‌ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು.

    ಆದರೆ, ಈ ತಂತ್ರವು ಸಫಲವಾಗಲಿಲ್ಲ.

  • ೧೯೩೨ರಲ್ಲಿ, ದಲಿತ ನಾಯಕ ಬಿ. ಆರ್‌. ಅಂಬೇಡ್ಕರ್‌ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್‌ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು.

    *ಇದು 'ಹರಿಜನ್‌' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್‌ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.[೨೨] ಆದಾಗ್ಯೂ, ಈ ಹೊಸ ಆಭಿಯಾನವು ದಲಿತ ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ.

  • ಪ್ರಮುಖ ಮುಖಂಡರಾದ ಬಿ.

    ಆರ್‌. ಅಂಬೇಡ್ಕರ್‌ ರವರು ಗಾಂಧಿಯವರು ಬಳಸಿದ ಹರಿಜನ್‌ ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು.

  • ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್‌ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು.

    ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.

  • ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್‌ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.
  • ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.[೨೩] ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು.

    ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್‌‌ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು.

  • ಬೋಸ್‌ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್‌ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್‌ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದರು.[೨೪]

ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ'

[ಬದಲಾಯಿಸಿ